ಎನ್ನ ಮನದಲ್ಲಿ ಜ್ಞಾನದಾಹದ ಬೀಜವನ್ನು ಬಿತ್ತಿ ಪೋಷಿಸಿದವನೆ!
ಎನ್ನ ಪಾದಗಳಿಗೆ ಅರುಣಗಿರಿ ಪ್ರದಕ್ಷಿಣೆಯ ಸವಿರುಚಿ ತೋರಿಸಿದವನೆ!
ಎನ್ನ ಹೃದಯಾಂತರಂಗವನು ಕರುಣಾಪೂರ್ಣ ಕಂಗಳಿಂದ ಸ್ಪರ್ಶಿಸಿದವನೆ!
ಎನ್ನೊಡೆಯ ಶ್ರೀ ರಮಣನೆ ನಿನಗೆ ಶತಕೋಟಿ ಪ್ರಣಾಮ!!
೨) ಸೋತಿಹೆನು
ನಿನ್ನನು ಕೊಂಡಾಡಲು ಪದಪುಂಜವೇ ಸಾಲದೆ ಸೋತಿಹೆನು!
ನಿನಗೆ ಸಮರ್ಪಕವಾಗಿ ಕೃತಜ್ಞತೆಗಳನ್ನರ್ಪಿಸಲಾಗದೆ ಸೋತಿಹೆನು!
ಭಾವುಕನಾಗಿ, ನಿನ್ನ ಮಹಿಮೆಯನು ಪಾಡಲಾಗದೆ ಸೋತಿಹೆನು!
ನಿನ್ನ ಕೃಪಾಸುಧೆಗೆ ಮೂಕವಿಸ್ಮಿತನಾಗಿ ಸೋತಿಹೆನು!
ಸೋತಿಹೆನು ನಾ ಸೋತಿಹೆನು ಶ್ರೀ ರಮಣನೆ!
ನಿನಗೆ ನಾ ಮನಸೋತಿಹೆನು!!
ಶ್ರೀ ರಮಣಾರ್ಪಣಮಸ್ತು.
No comments:
Post a Comment