ಎಂದೆಂದೂ ನಿನ್ನ ಮರೆಯದ ಕಾಲವೊಂದಿತ್ತು
ನಿನ್ನ ನೆನಪೇ ಬಾರದ ದಿನಗಳು ಬಂದಿತೆ?
ನಿನ್ನ ನಾಮ ಸ್ಮರಣೆಯಲ್ಲೇ ಮುಳುಗಿದ್ದ ಕಾಲವೊಂದಿತ್ತು
ನಾಲಿಗೆಯ ಅಂಚಿನಲ್ಲೇ ಅದು ನಿಂತುಹೋದ ದಿನಗಳು ಬಂದಿತೆ?
ಆತ್ಮವಿಚಾರದ ಗಲ್ಲಿ ಗಲ್ಲಿಗಳಲ್ಲಿ ಅಡ್ದಾಡುತಿದ್ದ ಕಾಲವೊಂದಿತ್ತು
ಅದರ ದಾರಿಯೇ ಮರೆತುನಿಂತ ದಿನಗಳು ಬಂದಿತೆ?
ಭಕ್ತಿ ಸಾಗರದಲ್ಲಿ ಮುಳುಗಿ ಕರಗಿದ ಕಾಲವೊಂದಿತ್ತು
ಆ ಸಾಗರವೇ ಬತ್ತಿಹೋಗಿರುವ ದಿನಗಳು ಬಂದಿತೆ?
ನಿನಗಾದರು, ಎನ್ನೊಡೆಯ ಶ್ರೀ ರಮಣನೆ
ನನ್ನ ನೆನಪೇ ಬಾರದ ದಿನಗಳು ಬಂದಿತೆ?
Friday, December 31, 2010
Subscribe to:
Post Comments (Atom)
for me, first lines have never been... second lines have always been! so, no cribbings! :)
ReplyDelete