Tuesday, November 9, 2010

ಆಸರೆ

ಆಗು ನೀ ಎನ್ನ ಆಸರೆ
ಬಿಗಿ ಹಿಡಿದುಕೊ ಹೃದಯದೊಳಗೆನ್ನ ಸೆರೆ!

ಸಂಸಾರ ಸಾಗರವ ದಾಟಲು ಆಗು ಎನ್ನ ಆಸರೆ
ಪರ ಲೋಕದಲಿ ನಿನ್ನ ಕಾಣಲು ಆಗು ನೀ ಎನ್ನ ಆಸರೆ!

ದೇಹ ದಾಹಗಳನ್ನು ನೀಗಿಸಲು ಆಗು ಎನ್ನ ಆಸರೆ
ದೇಹಾಭಿಮಾನವನು ಕಿತ್ತೊಗೆಯಲು ಆಗು ನೀ ಎನ್ನ ಆಸರೆ!

ನಿನ್ನ ಪ್ರೀತಿಯಲ್ಲಿ ಮುಳುಗಲು ಆಗು ಎನ್ನ ಆಸರೆ
ಅಂದಕಾರದಿಂದ ಉಷೆಯಡಿಗೆ ಹೊರಹೊಮ್ಮಲು ಆಗು ನೀ ಎನ್ನ ಆಸರೆ!

ಇಂದ್ರಿಯಗಳು ಬೇಕೆಂದಕಡೆಗೆನ್ನ ಒಯ್ಯಲಾಗದಂತೆ ಆಗು ಎನ್ನ ಆಸರೆ
ಮನಸ್ಸಿನ ಸ್ಥಿರತೆಯಲ್ಲಿ ಒಂದಾಗಲು ಆಗು ನೀ ಎನ್ನ ಆಸರೆ!

ಅರುಣಾಚಲ ರಮಣನೆ! ಆಗು ನೀ ಎನ್ನ ಸಂಪೂರ್ಣ ಆಸರೆ
ಬಿಗಿ ಹಿಡಿದಿಕೋ ಹೃದಯದೊಳಗೆನ್ನ ಸೆರೆ!

No comments:

Post a Comment