Thursday, August 6, 2009

ಪ್ರಣಾಮ - 2

ಬರಡು ಭೂಮಿಯಂತಿರುವ ಎನ್ನ ಹೃದಯವನು ಪ್ರೀತಿಯ ಮಳೆ ಸುರಿಸಿ ಪೋಷಿಸುವವನೇ!
ಐಹಿಕ ಸುಖದ ಕಾಡಾಗಿರುವ ಎನ್ನ ಮನವನು ಜ್ಞಾನಾಗ್ನಿಯ ಕಡ್ಗಿಚ್ಚಿನಿಂದ ಭಸ್ಮ ಮಾಡುವವನೇ!
ಬೆಟ್ಟ ಗುಡ್ಡಗಳಂತಿರುವ ಕಷ್ಟಗಳನು ಬೆಣ್ಣೆಯಂತೆ ಕರಗಿಸಿ ಆಹುತಿ ಪಡೆಯುವವನೇ!
ಎನ್ನೊಡೆಯ ಶ್ರೀ ರಮಣನೇ! ನಿನ್ನ ಚರಣಾರವಿಂದಗಳಿಗೆ ಶತ ಕೋಟಿ ಪ್ರಣಾಮ!!

No comments:

Post a Comment