Tuesday, May 31, 2011

ನಿನ್ನ ಕೃಪೆಯೊಂದನ್ನು ಬಿಟ್ಟು....

ಬ್ರಮೆಯಾಗುವ ಕನಸುಗಳು ಎನಗೆ ಬೇಡ
ಹಾದು ಹೋಗುವ ಅನುಭವಗಳು ಮೊದಲೇ ಬೇಡ
ತೀರದ ಕಾಮನೆಗಳ ಪೂರೈಕೆ ಬೇಡವೇ ಬೇಡ
ಪ್ರಭು, ನಿನ್ನ ಕೃಪೆಯೊಂದನ್ನು ಬಿಟ್ಟು ಬೇರ್ಯಾವುದೂ ಎನಗೆ ಬೇಡ.

I bow for your Grace

Without Your unbelievable expanse of Grace,
The source of I, I cannot trace!

Shoot me into pieces with Thy arrow of Love,
And dig out the rotten ego, with folded hands, I bow!

ಇನ್ನೂ ದಯೆ ಬಾರದೇಕೆ?

ಇಂದು ಎನ್ನ ಮಡದಿ ಮಾಡಿರುವಳು ನನ್ನ ಪಾದಗಳನ್ನು ಸ್ವಚ್ಛ!
ಅತಿ ಸುಂದರವೂ ಆಗಿವೆ ಅವು, ಕೊಳೆ ಇಲ್ಲವೇ ಇಲ್ಲ ತುಚ್ಚ!

ಪ್ರಾರ್ಥಿಸುತ, ಅವು ನಾಚಿ ಹಾತೊರೆಯುತ್ತಿದೆ ನವವಧುವಿನಂತೆ!
ತನ್ನ ಪ್ರಾಣೇಶ್ವರ ಅರುಣಾಚಲನ ಪ್ರದಕ್ಷಿಣಾ ಪಥದಲ್ಲಿ ಒಂದಾಗುವಂತೆ!

ನೀಡು ಎನಗೆ ಫಲ

ಯಾಕೋ ನನಗೆ ನಿನ್ನ ನೋಡಬೇಕಂಬ ಹಂಬಲ!
ವಿರಹ ತಾಳಲು ಇನ್ನಿಲ್ಲ ಎನ್ನಲ್ಲಿ ಭಲ!
ಬೇಕೇ ಬೇಕು ಆತ್ಮಶೋಧನೆಗೆ ಛಲ!
ಅದು ನನ್ನಲ್ಲಿಲ್ಲವೋ, ಆದರು ನೀಡು ಎನಗೆ ಫಲ!
ನೀಡು ಎನಗೆ ಫಲ!