Tuesday, August 7, 2012

ವೈಕುಂಟದಲಿ ಅರುಣಾಚಲ

ಶ್ರಾವಣದ ಒಂದು ಮುಂಜಾನೆ ಕಾಣದೊಂದು ಶಕ್ತಿ ನನ್ನಲ್ಲಿವ 
ವೇಂಕಟೇಶನ ದರುಶನ ಪಡೆಯುವ ಆಸೆ ಮೂಡಿಸಿತು 

ಮರುದಿನ ಮುಂಜಾನೆ ಕಣ್ತುಂಬಾ ವೇಂಕಟೇಶನ ನೋಡುಲು ವೈಕುಂಟ ದ್ವಾರದಲಿ ನಿಂತಿರುವಾಗ,
ಅದೇ ಅಂತರಾತ್ಮ ಶಕ್ತಿ ಮನಸ್ಸಿನಲ್ಲಿ ಅರುಣಾಚಲನ ಧ್ಯಾನ ಮೂಡಿಸಿತು

ಮನಸಿನಲ್ಲಿ ವೇಂ
ಕಟೇಶನೋ, ಆರುನಚಲನೋ ಎಂಬ ಇಕ್ಕಟ್ಟಿನ ಪರಿಸ್ತಿತಿಗೆ ಸಿಲುಕಿ
ಗುರು ರಮಣನೇ ಇದನ್ನು ಪರಿಹರಿಸುವಂತೆ ಮನಸ್ಸಿನಲ್ಲೇ ಪ್ರಾರ್ಥಿಸಿದೆ

ಸುಧೀರ್ಘವಾಗಿ ವೈಕುಂಟ ದ್ವಾರದಲ್ಲೇ
ಇರಿಸಿಕೊಂಡ ರಮಣನು
ಅಮೋಘ ದೃಶ್ಯವೊಂದನ್ನು ಎನಗೆ ಕೃಪಿಸಲು ಸಜ್ಜುಗೊಳಿಸಿದ್ದನು 

ಪ್ರತ್ಯಕ್ಷವಾಗಿ ಶೇಷಾಚಲನ 
ಆನಂದ ನಿಲಯವನ್ನು ಕಂಡೆ
ಮರುಗಳಿಗೆಯೇ, ಪರೋಕ್ಷವಾಗಿ ರಮಣನ  ಅರುಣಾಚಲನನ್ನು ಕಂಡೆ
 
ವೈಕುಂಟದಲಿ ವೆಂಕಟಾಚಲ, ಅರುಣಾಚಲರಿಬ್ಬರನ್ನೂ
(ಒಂದಾಗಿ) ಕಂಡು, ಪರಮಾನಂದ ಉಕ್ಕಿದ ಆ ಗಳಿಗೆ ....