ನೆನೆದವರ ಮನದಲ್ಲಿ ಅರುಣಾಚಲ!
ಮನಸಿನ ಕನಸಿನಲ್ಲಿ ಅರುಣಾಚಲ!
ಪ್ರತ್ಯಕ್ಷ ದೈವ ಅರುಣಾಚಲ!
ನಿರಾಕಾರ ರೂಪ ಅರುಣಾಚಲ!
ಕಣ್ಣಿನ ಅಂಚಿನಲ್ಲಿ ಅರುಣಾಚಲ!
ಹೃದಯಾಂತರಾಳದಲಿ ಅರುಣಾಚಲ!
ಸೂರ್ಯೋದಯದ ನಾಂದಿ ಅರುಣಾಚಲ!
ಪೌರ್ಣಮಿಯ ಚಂದ್ರ ಅರುಣಾಚಲ!
ಮದುವೆ ಮುಂಜಿಯಲ್ಲಿ ಅರುಣಾಚಲ!
ಸುಮಧುರ ಗಾನ ಅರುಣಾಚಲ!
ಪ್ರೀತಿಯ ಚುಂಬನ ಅರುಣಾಚಲ!
ಸಂಭೂಗದ ಯೋಗ ಅರುಣಾಚಲ!
ಸಿಟ್ಟಿನ ಬಿಸಿಯುಸಿರು ಅರುಣಾಚಲ!
ಆನಂದಭಾಷ್ಪ ಅರುಣಾಚಲ!
ಭಕ್ತಿಗೆ ಶಕ್ತಿ ಅರುಣಾಚಲ!
ಮುಕ್ತಿಗೆ ಮಾರ್ಗ ಅರುಣಾಚಲ!
ನಿನಗಾಗಿ ಕಾಯುತ್ತಿರುವ ನನ್ನ,
ಕಣ್ಣೀರ ಹನಿ ಹನಿಯು ಅರುಣಾಚಲ!
Friday, August 19, 2011
Subscribe to:
Posts (Atom)