ಮರುಭೂಮಿಯಲ್ಲಿ ಹನಿ ನೀರಿಗಾಗಿ ನಾನು ಒದ್ದಾಡುತ್ತಿದ್ದೆ!
ದಾಹವು ಎನ್ನನ್ನು ಮುಗಿಸಿಯೇಬಿಟ್ಟೀತೆ ಎಂಬ ಭಯದಲ್ಲಿದ್ದೆ!
ಪ್ರಾಣ ಭಿಕ್ಷೆಗಾಗಿ ಅವನಲ್ಲಿ ಮೊರೆಯನ್ನಿಟ್ಟಿದ್ದೆ!
ಅನಥರಕ್ಷಕನೆಂದು ಅವನಲ್ಲಿ ಭರವಸೆಯನ್ನಿಟ್ಟಿದ್ದೆ!
ಮರುಗಳಿಗೆಯಲ್ಲಿಯೇ ಕರುಣಾಮಯಿಯ ಕೃಪಾಸುಧೆ ನನ್ನನ್ನು ಮುಟ್ಟಿತ್ತು!
ಊರಿಂದ ಕರೆಯೊಂದು ಅಪಾರ ಭರವಸೆಯ ಕೊಟ್ಟಿತ್ತು!
ಸಂಧ್ಯಾಕಾಲದಲ್ಲಿ ಕಂಡ ಜ್ಯೋತಿಯು, ಪ್ರಾಣ ಭಿಕ್ಷೆಯ ನೀಡಿತ್ತು!
ಅಮೃತದ ಹನಿಯೊಂದು ಎನ್ನ ದಾಹವ ನೀಗಿಸಿತ್ತು!
ಹನಿ ಒಂದಾದರೇನು ಎರಡಾದರೇನು, ಅಮೃತದ ಸಿಹಿ ಸಿಹಿಯಲ್ಲವೇನು!
Thursday, December 3, 2009
Subscribe to:
Posts (Atom)